ಶನಿವಾರ, ಸೆಪ್ಟೆಂಬರ್ 8, 2018

ಶಿಕ್ಷಕರೊಂದಿಗಿನ 15 ದಿನಗಳ ಪಶ್ಚಿಮ ಬಂಗಾಳ.......

         

ಶಿಕ್ಷಕರೊಂದಿಗಿನ 15 ದಿನಗಳ ಪಶ್ಚಿಮ ಬಂಗಾಳ.......

          ಮರ್ಕ‌‌‍‌‌‍ಝುಲ್ ಹಿದಾಯ ಕೊಡಗು ಇಲ್ಲಿನ ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರೊಂದಿಗಿನ 15 ದಿನಗಳ ಪಶ್ಚಿಮ ಬಂಗಾಳದ ಗ್ರಾಮಗಳಲ್ಲಿನ ಯಾತ್ರೆಯು ನೆನ್ನೆಗೆ ಕೊನೆ ಗೊಂಡಿತು.  ಪಶ್ಚಿಮ ಬಂಗಾಳಿನಲ್ಲೂ ನೆರೆಯ ಪ್ರದೇಶಗಳಲ್ಲಿಯೂ ಸ್ನೇಹಿತ ಝುಹೈರುದ್ದೀನ್ ನೂರಾನಿಯವರ ನೇತ್ತೃತ್ವದಲ್ಲಿ ನಡೆಯುವ ಚಟುವಟಿಕೆಗಳನ್ನು ನೋಡುವುದು ಮತ್ತು ಕಲಿಯೂದಾಗಿತ್ತು ಯಾತ್ರೆಯ ಗುರಿ.
        ಕಲ್ಕತ್ತ ನಗರದಿಂದ ತ್ವೈಬಾ ಗಾರ್ಡನಿಗ ಒಂದು ದಿನದ  ಸಂಚಾರವಿದೆ. ಬಾಂಗ್ಳಾದೇಶ ಗಡಿಯಲ್ಲಿನ ಈ ಪುಟ್ಟ ಗ್ರಾಮದಲ್ಲಿ ತಲೆಯೆತ್ತಿ ನಿಂತಿರುವ ಸಂಸ್ಥೆಯಲ್ಲಾಗಿದೆ ದಾಯಿಗಳು ಕೇಂಧ್ರೀಕ್ರತರಾಗಿರುವುದು. ಮರ್ಕಝ್ ನ ಕಾರುಣ್ಯ ಚಟುವಟಿಕಗಳನ್ನು ತಿಳಿಯಲು ವಿವಿದ ರಾಜ್ಯ, ರಾಷ್ಟ್ರಗಳಿಂದ ಬರುವ ಪ್ರತಿನಿದಿ ಗುಂಪುಗಳಿಗೆ ಕೇವಲ ಗದ್ದೆಗಳು ಮತ್ತು ಮಣ್ಣಿನ ಮನೆಗಳಿರುವ ಈ ಗ್ರಾಮ ಕೌತುಕವಾಗಿದೆ. ಝುಹೈರುದ್ದೀನ್ ನೂರಾನಿಯವರೊಂದಿಗೆ ಮೊಹಮ್ಮದ್ ಅಲಿ ನೂರಾನಿ,ಶರೀಫ್ ನೂರಾನಿ,ಇರ್ಷಾದ್ ಝೈನ್ ನೂರಾನಿ,ಬದ್ರುದ್ದೀನ್ ನೂರಾನಿ,ಶುಕೂರ್ ನೂರಾನಿ,ಇಬ್ರಾಹಿಂ ಸಖಾಫಿ ಎಲ್ಲರೂ ನಿರ್ದಿಷ್ಠ ಲಕ್ಷ್ಯದೊಂದಿಗೆ ಕಾರ್ಯನಿರತರರಾಗಿದ್ದಾರೆ.
               5 ವರ್ಷದಲ್ಲಿ ತ್ವೈಬಾ ತನ್ನದಾಗಿಸಿದ್ದು ಕುತೂಹಲವನ್ನುಂಟುಮಾಡುವಂತಹದು. ಸುಂದರವಾದ 4 ಕ್ಯಾಂಪಸುಗಳಲ್ಲಿ ಬಂಗಾಳಿ ವಿದ್ಯಾರ್ಥಿಗಳು ನಮ್ಮೂರಿನ ವಿಧ್ಯಾರ್ಥಿಗಳಂತೆಯೊ ಅದಕ್ಕಿಂತ ಮಿಗಿಲಾಗಿಯೋ ಸ್ಮಾರ್ಟ್ ಆಗಿ ಕಾಣಿಸುತ್ತಿತ್ತು. ಒಡಿಶಾದಲ್ಲೂ ಬಂಗಾಳಿನಲ್ಲೂ ನಡೆಯುತ್ತಿರುವ ಶಾಲೆಗಳು ಉತ್ತಮ ಗುಣಮಟ್ಟವನ್ನು ಹೊಂದಿತ್ತು. ಅಲ್ಲದೆ ಒಡಿಶ,ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳಲ್ಲಾಗಿ ನೂರಕ್ಕಿಂತ ಹೆಚ್ಚು ಮಸೀದಿಗಳು ಮಕ್ತಬಗಳು ನಿರ್ಮಾಣಗೊಂಡಿವೆ.
              ಹೆಚ್ಚಾಗಿ ಯಾತ್ರೆಗಳನ್ನು ಮಾಡುವವರಾಗಿದ್ದೇವೆ ನಾವುಗಳು. ನಮ್ಮ ಮುಂದಿನ ಯಾತ್ರೆಯು ತ್ವೈಬಾ ಗಾರ್ಡನ್ ಗಾಗಲಿ. ಮುಂದಿನ ತಿಂಗಳು (ಏಪ್ರೀಲ್) ಮೊದಲನೆಯ ವಾರ ಮಹಾ ಸಮ್ಮೇಳನ ನಡೆಯಲಿದೆ ಅಲ್ಲಿ. ಶೈಖುನಾ ಸುಲ್ತಾನುಲ್ ಉಲಮ, ಅಲೀ ಬಾಫಕಿ ತಂಗಳ್ ಸೇರಿದಂತೆ ಹಲವಾರು ಸುನ್ನೀ ನೇತಾರರು ಒಗ್ಗೂಡಲಿದ್ದಾರೆ. ಸಾದ್ಯವಾದರೆ ಅಂದೇ ಆಗಲೀ ,(ಬಂಗಾಳಿನ ಕುರಿತು ವಿವರವಾಗಿ ನಮ್ಮ ಗುರು ಮತ್ತು ಮಾರ್ಗದರ್ಶಿಯರಾದ ಮುಹಿಯುದ್ದೀನ್ ಸಖಾಫಿ ಉಸ್ತಾದರು ಬರೆದಿದ್ದಾರೆ. \ರಿಸಾಲ ಕಳೆದ ಸಂಚಿಕ\) ದಾಯಿಗಳೊಂದಿಗಿನ ನಮ್ಮ ಸಂಘವನ್ನು ತುಂಬು ಹೃದಯದಿಂದ ಸ್ವಾಗತಿಸಿದ ತ್ವೈಬಾದ ಸ್ನೇಹಿತರು ಮಹಾ ಸಮ್ಮೇಳನದ ಬ್ಯುಸಿಯನ್ನು ಬದಿಗಿಟ್ಟು ಗ್ರಾಮಗಳಲ್ಲಿ ಸಂಚರಿಸಲು ದಿನಪೂರ್ತಿ ನಮಗಾಗಿ ಮೀಸಲಿಟ್ಟು ವಿಧ್ಯಾರ್ಥಿಗಳಿಗೆ ತರಗತಿಗಳನ್ನು ನೀಡಿ ನಮಗವಶ್ಯಕವಾದ ಎಲ್ಲವನ್ನೂ ನೀಡಿ ದೀನೀ ದಅವತಿಗಿರುವ ಉತ್ಸಾಹ ಮತ್ತೊಮ್ಮೆ ಖಚಿತಪಡಿಸಿದರು. ಅವರೊಂದಿಗೆ, ಕಲ್ಕತ್ತದ ಮಿಸ್ಬಾ ಮತ್ತು ರಹಮಾನಿಕ್ಕಾ ರವರೂಕೂಡಾ ಧನ್ಯವಾದಕ್ಕರ್ಹರಾಗಿದ್ದಾರೆ. ಅಲ್ಲಾಹು ಎಲ್ಲವನ್ನೂ ಸ್ವೀಕರಿಸಲಿ .....ಆಮೀನ್
            
ಲೇಖಕರು
ಶಿಹಾಬುದ್ದೀನ್ ನೂರಾನಿ
ಮರ್ಕಝುಲ್ ಹಿದಾಯಾ ಕೊಡಗು.

 ಭಾಷಾಂತರ
ಮುಹಮ್ಮದ್ ಶರೀಫ್
 ಆಝಾದ್ ನಗರ್ ಕೊಟ್ಟಮುಡಿ